ವಕ್ರತುಂಡಾ ಗಣೇಶ ಮಂತ್ರ
“ವಕ್ರತುಂಡ ಮಹಾ ಕಾಯ ಸೂರ್ಯ ಕೋಟಿ ಸಮಪ್ರಭ |
ನಿರ್ವಿಘ್ನ೦ ಕುರು ಮೇ ದೇವಾ ಸರ್ವ ಕಾರ್ಯೇಷು ಸರ್ವದಾ.”
ಅರ್ಥ: ಬೃಹದಾಕಾರನೇ , ಮುರಿದ ದಂತಉಳ್ಳವನೇ, ಸುರ್ಯರ ಪ್ರಕಾಶವುಳ್ಳ ಹೇ ಗಣಪತಿ! ನನ್ನ ಕೆಲಸಗಳಲ್ಲಿ ವಿಘ್ನ ಬರೆದಂತೆ ಅನುಗ್ರಹಿಸು
ಅತ್ಯಂತ ಮುಖ್ಯವಾದ ಗಣಪತಿ ಮಂತ್ರಗಳಲ್ಲಿ ಒಂದಾಗಿದೆ,ಈ ಮಂತ್ರವನ್ನು ಜಪಿಸುವುದರಿಂದ ಜೀವನದಲ್ಲಿ ಇದ್ದ ಅನೇಕ ಅಡೆತಡೆಗಳಿಂದ ಮುಕ್ತಿಯನ್ನು ಪಡೆಯುತ್ತಾನೆ ಮತ್ತು ಸಮೃದ್ಧಿ,ಸಿದ್ಧಿ,ಜ್ಞಾನ ಅದೃಷ್ಟ ಮತ್ತು ಯಶಸ್ಸನ್ನು ಪಡೆದುಕೊಳ್ಳಬಹುದು.
ವಕ್ರತುಂಡಾ – ಅಂದರೆ ನೇರವಾಗಿರದ ಬಾಗಿದ ಎಂದರ್ಥ.
ಮಹಾಕಾಯ – ಅಂದರೆ ದೊಡ್ಡ ದೇಹ , ಅತ್ಯಂತ ಶಕ್ತಿಶಾಲಿ ಎಂದರ್ಥ.
ಸೂರ್ಯಕೋಟಿ – ಅಂದರೆ ‘ಸೂರ್ಯ’
ಸೂರ್ಯ ಕೋಟಿ ಸಮಪ್ರಭ – ಅಂದರೆ ಸೂರ್ಯನ ಬೆಳಕನ್ನು ಒಟ್ಟುಗೂಡಿಸುತ್ತದೆ.
ನಿರ್ವಿಘ್ನ೦ – ಅಡಚಣೆ ಮುಕ್ತ.
ಕುರುಮೆ – ನನಗೆ ಕೊಡು.
ದೇವ – ದೇವರು ಎಂದರ್ಥ.
ಸರ್ವ – ಎಲ್ಲ ಎಂದರ್ಥ.
ಕರ್ಯೇಶು -ಕೆಲಸ
ಸರ್ವದಾ-ಯಾವಾಗಲೂ.