ಗಣೇಶಾ ಮಂತ್ರಗಳು
ಸಂಕಷ್ಟನಾಶನ ಗಣೇಶ ಸ್ತೋತ್ರಮ್
ಶ್ರೀ ಗಣೇಶಾಯ ನಮಃ
ಓಂ ಪ್ರಣಮ್ಯ ಶಿರಸಾ ದೇವ೦ ಗೌರಿಪುತ್ರಂ ವಿನಾಯಕಮ್ |
ಭಕ್ತವಾಸಂ ಸ್ಮರೇನ್ನಿತ್ಯಮಯಃ ಕಾಮಾರ್ಥಸಿದ್ದಯೇ ||
ಪ್ರಥಮ0 ವಕ್ರತುಂಡ0ಚ ಏಕದಂತಂ ದ್ವಿತೀಯಕಮ್ |
ತೃತೀಯ0 ಕೃಷ್ಣಪಿಂಗಾಕ್ಷಂ ಗಜವಕ್ತ್ರ0 ಚತುರ್ಥಕಮ್||
ಲಿಂಬೋದರಂ ಪಂಚಮಂ ಚ ಷಷ್ಠಂ ವಿಕಟಮೇವಚ|
ಸಪ್ತಮಂ ವಿಘ್ನ ರಾಜೇಂದ್ರ ಧಮ್ರವರ್ಣಂ ತಥಾಷ್ಠಮಮ್||
ನವಮಂ ಬಾಲ ಚಂದ್ರ0 ಚ ದಶಮಂ ತು ವಿನಾಯಕಮ್|
ಏಕಾದಶಂ ಗಣಪತಿಂ ದ್ವಾದಶಂ ಗಜಾನನಮ್||
ದ್ವಾದಶೈತಾನಿ ನಾಮನಿ ತ್ರಿಸಂಧ್ಯಂ ಯಃ ಪಠೇನ್ನರಃ|
ನ ಚ ವಿಘ್ನ ಭಯಂ ತಸ್ಯ ಸರ್ವ ಸಿದ್ಧಿ ಕರಂ ಪ್ರಭೋ||
ವಿದ್ಯಾರ್ಥಿ ಲಭತೇ ವಿದ್ಯಾಂ ಧನಾರ್ಥಿ ಲಭತೇ ಧನಂ|
ಪುತ್ರಾ ರ್ಥ ಲಭತೇ ಪುತ್ರಾನ್ ಮೋಕ್ಷಾರ್ಥೀ ಲಭತೇ ಗತಿಂ||
ಜಪೇದ್ಗಣಪತಿಸ್ತೋತ್ರಂ ಷಡ್ಭಿರ್ಮಾಸ್ಯಃ ಫಲಂ ಲಭೇತ್|
ಸಂವತ್ಸರೇಣ ಸಿದ್ಧಂ ಚ ಲಭತೇ ನಾತ್ರ ಸಂಶಯಃ||
ಅಷ್ಟಬ್ಯೋ ಬ್ರಾಹ್ಮಣೇಭ್ಯಶ್ಚ ಲಿಖಿತ್ವಾಯಃ ಸಮರ್ಪಯೇತ್|
ತಸ್ಯ ವಿದ್ಯಾ ಭವೇತ್ ಸರ್ವಾ ಗಣೇಶಸ್ಯ ಪ್ರಸಾದತಃ||
ಈ ಸಂಕಷ್ಟಹರ ಗಣಪತಿ ಚತುರ್ಥಿಯ ಸ್ತೋತ್ರಗಳನ್ನು ಪ್ರತಿದಿನ ಪಠಣ
ಮಾಡುವುದರಿಂದ ಇಷ್ಟಾರ್ಥಗಳು ಆರು ತಿಂಗಳಲ್ಲಿ ಸಿದ್ಧಿಸುವವೆಂದು ಶ್ರೀ ನಾರದರ ಸ್ತೋತ್ರಗಳು ಹೇಳುತ್ತವೆ
ಗಣೇಶಾ ವಕ್ರತುಂಡ ಮಂತ್ರ
“ವಕ್ರತುಂಡ ಮಹಾ ಕಾಯ ಸೂರ್ಯ ಕೋಟಿ ಸಮಪ್ರಭ
ನಿರ್ವಿಘ್ನಮ್ ಕುರು ಮೇ ದೇವಾ ಸರ್ವ ಕಾರ್ಯೇಶು ಸರ್ವದಾ.”
ಈ ಮಂತ್ರವನ್ನು ಜಪಿಸುವುದರಿಂದ ನಾವು ನಮ್ಮ ಜೀವನದಲ್ಲಿ ಯಶಸ್ಸನ್ನು ಪಡೆದುಕೊಳ್ಳಬಹುದು.ನಮ್ಮ ಜೀವನದಲ್ಲಿ ಇರುವ ಅಡೆತಡೆಗಳಿಂದ ಮುಕ್ತಿಯನ್ನು ಪಡೆಯಬಹುದು . ಯಶಸ್ಸು,ಸಂಪತ್ತು ಮತ್ತು ಸಮೃದ್ಧಿಗಾಗಿ ಈ ಮಂತ್ರವನ್ನು ಜಪಿಸುತ್ತಾರೆ.
ಗಣೇಶಾ ಗಯಾತ್ರಿ ಮಂತ್ರ
“ಓಂ ಏಕದಂತಾಯ ವಿದ್ಮಹೇ, ವಕ್ರತುಂಡಾಯ ಧೀಮಹಿ,
ತನ್ನೋ ದಂತಿ ಪ್ರಚೋದಯಾತ್.”
ಈ ಮಂತ್ರವನ್ನು ಜಪಿಸುವುದರಿಂದ ನಾವು ತಾಳ್ಮೆ,ನಮ್ರತೆ ಮತ್ತು ಬುದ್ಧಿವಂತಿಕೆಯನ್ನು ಪಡೆದುಕೊಳ್ಳುತ್ತಾರೆ.
ಗಣಪತಿ ಮೂಲ ಮಂತ್ರ
“ಓಂ ಗಮ್ ಗಣಪತಯೇ ನಮಃ”
ಈ ಮಂತ್ರವನ್ನು ನಾವು ಯಾವುದೇ ಕೆಲಸ ಕಾರ್ಯಗಳನ್ನು ಆರಂಭಿಸುವ ಮುನ್ನ ಈ ಮಂತ್ರ ಹೇಳಿದರೆ ಜೀವನದಲ್ಲಿ ಆ ಕೆಲಸದಲ್ಲಿ ಯಶಸ್ಸು ಸಿಗುತ್ತದೆ
ಬಾಲ ಗಣಪತಿ ಮಂತ್ರ
ಕರಸ್ಥ ಕದಲೀ ಚೂತಪನಸೇಕ್ಷುಕ ಮೋದಕಂ |
ಬಾಲಸೂರ್ಯ ನಿಭo ವಂದೇ ದೇವಂ
ಬಾಲ ಗಣಾಧಿಪಂ||
ಬಕ್ತ ಗಣಪತಿ
ನಾಳಿಕೇರಾಮರ್ಕದಲೀ
ಗುಡಪಾಯಸಧಾರಿಣಂ |
ಶರಶ್ಚಂದ್ರಾಭವಪುಷಂ ಭಜೇ
ಭಕ್ತ ಗಣಾಧಿ ಪಂ