Kannada Grammar in English

Spread the love

Kannada Grammar in English​

In this blog lets learn in detail about Kannada Grammar in English.

Firstly, let’s see the basic information about alphabets in kannada.

Before getting in to detail about Kannada grammar let’s see the basic information about Kannada Varnamale / Kannada Alphabets

There are 49 Kannada Alphabets. They are mainly divided into three parts

  • Swaragallu-From ಅ to ಔ (13 swaragalu)
  • Yogavahakagalu- ಅಂ ಅಃ (2)
  • Vanjanagalu-From ಕ to ಳ (34) total-49 Letters

Kannada Grammar in English – ನಾಮಪದಗಳು/Nouns

Nouns/ನಾಮಪದ

Namapada in English means Nouns

ವ್ಯಕ್ತಿ,ಸ್ಥಳ, ವಸ್ತು  ಮತ್ತು ಪ್ರಾಣಿಗಳ ಹೆಸರುಗಳನ್ನು ಸೂಚಿಸುವ ಪದಗಳಿಗೆ ನಾಮಪದ ಎನ್ನುವರು

ಉದಾಹರಣೆ : ಬೆಂಗಳೂರು, ಹುಲಿ,ಕಲ್ಲು, ರಾಜು ಇತ್ಯಾದಿ

All kinds of persons,animals,places and things have Names.such naming words are called Nouns

Example: Temple,Bangalore,Park,School

ನಾಮಪದಗಳು/Nouns

ರೂಢನಾಮ/Common Noun

ಅಂಕಿತನಾಮ/Proper noun

ಅನ್ವರ್ಥನಾಮ/Abstract noun

Kannada Grammar in English – what do you mean by Common Noun,Proper Noun,Abstract Noun

ರೂಢನಾಮ/ Common Noun

ರೂಢಿಯಿಂದ ಬಂದ ಪದಗಳಿಗೆ ರೂಢನಾಮ ಎನ್ನುವರು

ಉದಾಹರಣೆ : ದೇಶ,ನದಿ,ಪರ್ವತ, ಹೆಂಗಸು,ಪಟ್ಟಣ ಇತ್ಯಾದಿ

Common Noun is a general name for similar kind of things,Persons or places.It does not refer to any particular thing,person or place

Example:River,Country,mountains,Animals

ಅಂಕಿತನಾಮ/ Proper Noun

ಗುರುತಿಗಾಗಿ ಹಾಗೂ ವ್ಯವಹಾರದ ಉಪಯೋಗಕ್ಕೆ ಇಟ್ಟುಕೊಂಡ ಹೆಸರುಗಳಲ್ಲ ಅಂಕಿತನಾಮಗಳು

ಉದಾಹರಣೆ : ಭಾರತ, ಗಂಗಾ, ಬ್ರಹ್ಮಪುತ್ರ ಪುರಂದರವಿಠಲ, ಕೂಡಲಸಂಗಮದೇವ ಇತ್ಯಾದಿ

Proper Noun

The names of a particular place or person or thing,it is called a proper noun.

Example : Ganga,Delhi,India,Raju

ಅನ್ವರ್ಥನಾಮ/Abstract Nouns

ರೂಪ,ಗುಣ, ವೃತ್ತಿ, ಸ್ವಭಾವಾದಿ ವಿಶೇಷವಾದ ಅರ್ಥಕ್ಕೆ ಅನುಗುಣವಾಗಿ ಇಟ್ಟ ಹೆಸರುಗಳಲ್ಲ

ಅನ್ವರ್ಥನಾಮಗಳು

ಉದಾಹರಣೆ : ವ್ಯಾಪಾರಿ,ರೋಗಿ, ಯೋಗಿ,ಬಳೆಗಾರ, ಶಿಕ್ಷಕ,ವಿದ್ಯಾರ್ಥಿ ಇತ್ಯಾದಿ

Abstract Nouns

Nouns that name the qualities in persons,animals or things are called Abstract Nouns.

Example:Kind,poor,humble,honest

Kannada Grammar in English – ಕಾಲಗಳು/Tenses

ಕಾಲಗಳು/Tenses

ನಡೆದ,ನಡೆಯುತ್ತಿರುವ, ಮತ್ತು ನಡೆಯುವ ಕ್ರಿಯೆಗಳನ್ನು ಸೂಚಿಸುವುದೇ ಕಾಲಗಳು

Tenses denotes the time an action takes place, whether in the past, in the present or will take some time in the future.

Let’s learn about tenses in detail

ಇವುಗಳಲ್ಲಿ ಮೂರು ವಿಧ

  • ಭೂತಕಾಲ/Past Tense
  • ವರ್ತಮಾನಕಾಲ/Present Tense
  • ಭವಿಷ್ಯ ತ್  ಕಾಲ /Future Tense

ಭೂತಕಾಲ(ನಡೆದ)

ಭೂತಕಾಲ(Past Tense)

ನಡೆದು ಹೋದ ಕ್ರಿಯೆಯ ಬಗ್ಗೆ/ ಕಾರ್ಯದ ಬಗ್ಗೆ ತಿಳಿಸುವ ಕಾಲವನ್ನು ಭೂತಕಾಲ

 ಎನ್ನುವರು

ಉದಾಹರಣೆ :

ರಾಜು ಮನೆಗೆಲಸವನ್ನು ಮಾಡಿದನು.

ರಾಣಿ ಮಾರುಕಟ್ಟೆಗೆ ಹೋದಳು

ಗುರುಗಳು ಪಾಠವನ್ನು ಹೇಳಿದರು

ಭೂತಕಾಲದಲ್ಲಿ ದ- ಪ್ರತ್ಯಯ ಕ್ರಿಯಾಪದಕ್ಕೆ ಸೇರುತ್ತದೆ

Past Tense

Past Tense are used to refer to actions that happened in the past or the actions that has already happened

Examples

It rained yesterday.

I filled a jug with two glasses of water.

ವರ್ತಮಾನಕಾಲ(ನಡೆಯುತ್ತಿರುವ)(Present Tense)

ಪ್ರಸ್ತುತವಾಗಿ ನಡೆಯುತ್ತಿರುವ ಕ್ರಿಯೆಯ ಬಗ್ಗೆ /ಕಾರ್ಯದ ಬಗ್ಗೆ ತಿಳಿಸುವ ಕಾಲವನ್ನು ವರ್ತಮಾನಕಾಲ ಎನ್ನುವರು

ಉದಾಹರಣೆ :

ರಾಜು ತೋಟದಲ್ಲಿ ಕೆಲಸ ಮಾಡುತ್ತಾನೆ

ಲಕ್ಷಿ ಶಾಲೆಗೆ ಹೋಗುತ್ತಾಳೆ

ಅವರು ಜಮೀನಿನಲ್ಲಿ ದುಡಿಯುತ್ತಾರೆ

 ವರ್ತಮಾನಕಾಲದಲ್ಲಿ  ಉತ್ತ,ತ್ತ-ಪ್ರತ್ಯಯ ಕ್ರಿಯಪದಕ್ಕೆ ಸೇರುತ್ತದೆ.

Present Tense

 Present Tense are used to refer to actions that are happening now ( At Present)

Examples

I am going to the  Market.

Raj is singing nicely

ಭವಿಷ್ಯ ತ್  ಕಾಲ (Future Tense)

ಮುಂದೆ ನಡೆಯುವ ಕ್ರಿಯೆಯ ಬಗ್ಗೆ /ಕಾರ್ಯದ ಬಗ್ಗೆ ತಿಳಿಸುವ ಕಾಲವನ್ನು ಭವಿಷ್ಯ ತ್  ಕಾಲ

 ಎನ್ನುವರು

ಉದಾಹರಣೆ :

ಪ್ರಸಾದ್ ಶಿಕ್ಷಕ ಆಗುವನು

ಶಾಲಿನಿ ನಟಿ ಆಗುವಳು

ವೈದ್ಯರು ನಮ್ಮ ಮನೆಗೆ ಬರುವರು

 ಭವಿಷ್ಯ ತ್  ಕಾಲದಲ್ಲಿ ವ -ಪ್ರತ್ಯಯ ಕ್ರಿಯಪದಕ್ಕೆ ಸೇರುತ್ತದೆ.

Future Tense

 Future Tense are used to refer to actions that will be happening in Future.

Examples

He will come to Bangalore tomorrow.

The bus is leaving at 5.00 PM.

In this below table we provided with few examples that how it will change in past tense,present tense,future tense.

ಭೂತಕಾಲ,ವರ್ತಮಾನಕಾಲ ಮತ್ತು ಭವಿಷ್ಯ ತ್  ಕಾಲಗಳಲ್ಲಿ ಪದಗಳು ಹೇಗೆ ಬದಲಾಗುತ್ತದೆ ಎಂಬುದಕ್ಕೆ ಈ ಕೆಳಗಿನ ಕೋಷ್ಟಕದಲ್ಲಿ ನಾವು ಕೆಲವು ಉದಾಹರಣೆಗಳನ್ನು ನೀಡಿದ್ದೇವೆ.

ರಾಜು ಮನೆಗೆ ಬಂದನು- ಭೂತಕಾಲ

ರಾಜು ಮನೆಗೆ ಬರುತ್ತಾನೆ- ವರ್ತಮಾನಕಾಲ

ರಾಜು ಮನೆಗೆ ಬರುವನು-ಭವಿಷ್ಯ ತ್  ಕಾಲ

ಭೂತಕಾಲವರ್ತಮಾನಕಾಲಭವಿಷ್ಯ ತ್  ಕಾಲ
ಆಡಿದನುಆಡುತ್ತೇನೆಆಡುವೆನು
ನೋಡಿದೆನುನೋಡುತ್ತೇನೆನೋಡುವೆನು
ಬೇಡಿದಳುಬೇಡುತ್ತಾಳೆಬೇಡುವಳು
ಓಡಿದನುಓಡುತ್ತಾನೆಓಡುವನು
ನಡೆಯಿತುನಡೆಯುತ್ತದೆನಡೆಯುವುದು

Kannada Grammar in English – swaraksharagalu  , yogavahagalu, vyanjanagalu

Kannada Grammar in English – Let’s learn in detail about kannada alphabets, swaraksharagalu  , yogavahagalu, vyanjanagalu

ಕನ್ನಡದಲ್ಲಿ 49 ಅಕ್ಷರಗಳಿವೆ.

ವರ್ಣಮಾಲೆಯಲ್ಲಿ ಮೂರು ವಿಧಗಳು

ಸ್ವರಾಕ್ಷರಗಳು- ಅ ಇಂದ ಔ (13)

ಯೋಗವಾಹಗಳು- ಅಂ ಅಃ (2)

ವ್ಯಂಜನಾಕ್ಷರಗಳು- ಕ ಇಂದ ಳ (34)

ಸ್ವರಾಕ್ಷರಗಳು

ಸ್ವರಾಕ್ಷರಗಳು ಎಂದರೆ ಸ್ವತಂತ್ರವಾಗಿ ಉಚ್ಚರಿಸಲಾಗುವ ಅಕ್ಷರಗಳು

ಒಟ್ಟು ಸ್ವರಾಕ್ಷಗಳು 13

Swaraksharagalu means which can be spelled independently

There are two types of swaraksharagalu

Harswaswara

Deergaswara

ಸ್ವರಾಕ್ಷರಗಳಲ್ಲಿ ಎರಡು ವಿಧ

ಹ್ರಸ್ವಸ್ವರಗಳು

ದೀರ್ಘಸ್ವರಗಳು

ಹ್ರಸ್ವಸ್ವರ

ಒಂದು  ಮಾತ್ರಾ ಕಾಲದಲ್ಲಿ ಉಚ್ಚರಿಸಲಾಗುವ ಅಕ್ಷರಗಳು ಹ್ರಸ್ವಸ್ವರಗಳು

The letters pronounced  at once/at a short time

ಅ ಇ ಉ ಋ ಎ ಒ

ದೀರ್ಘಸ್ವರಗಳು

ಎರಡು ಮಾತ್ರಾ ಕಾಲದಲ್ಲಿ ಉಚ್ಚರಿಸಲಾಗುವ ಅಕ್ಷರಗಳು ದೀರ್ಘಸ್ವರಗಳು

ಆ ಈ ಊ ಏ ಐ ಓ ಔ

The letters which cannot be pronounced  at once/ or takes long time

ಯೋಗವಾಹಗಳು- ಅಂ ಅಃ (2)

ಯೋಗವಾಹಗಳು ಎಂದರೆ ಯಾವುದಾದರೂ ಒಂದು ಸ್ವರಾಕ್ಷರದ ಜೊತೆಗೆ ಕೂಡಿಕೊಂಡರೆ ಮಾತ್ರ ಉಚ್ಚರಿಸಲು ಸಾಧ್ಯವಾಗುವ ಅಕ್ಷರಗಳನ್ನು ಯೋಗವಾಹಗಳು ಎನ್ನುತ್ತಾರೆ.

yogavahagalu  means alphabets/Characters that can only be pronounced in combination with Swaraksharagalu are called yogavahagalu

They are divided into two types

Anuswara

visarga

 ಯೋಗವಾಹಗಳಲ್ಲಿ ಎರಡು ವಿಧ

ಅನುಸ್ವಾರ (0)

ವಿಸರ್ಗ: ದಃಖ

ಉದಾ:

ಸಂಖ್ಯೆ

ದಃಖ

ವ್ಯಂಜನಾಕ್ಷರಗಳು

 ವ್ಯಂಜನಾಕ್ಷರಗಳು  ಎಂದರೆ ಸ್ವರಗಳ ಸಹಾಯದಿಂದ ಉಚ್ಚರಿಸಲಾಗುವ ಅಕ್ಷರಗಳು

Vyanjanaksharagalu Means letters that are spelled with the help of vowels.

They are divided into two types

Vargiya Vyanjanagalu

AaVargiya Vyanjanagalu

ವ್ಯಂಜನಾಕ್ಷರಗಳಲ್ಲಿ ಎರಡು ವಿಧ

ವರ್ಗೀಯ ವ್ಯಂಜನಗಳು

ಅವರ್ಗೀಯ ವ್ಯಂಜನಗಳು

ವರ್ಗೀಯ ವ್ಯಂಜನಗಳು

 ವರ್ಗೀಯ ವ್ಯಂಜನಗಳು  ಎಂದರೆ ಇವು ಉತ್ಪತ್ತಿಯಾಗುವ ಸ್ಥಾನಗಳಿಗೆ ಅನುಗುಣವಾಗಿ ವರ್ಗ ಮಾಡಿರುವುದರಿಂದ ವರ್ಗೀಯ ವ್ಯಂಜನಗಳು .

Vargiya Vyanjanagalu means that these are classified according to the positions produced.

ಅಲ್ಪ ಪ್ರಾಣಾಕ್ಷರಗಳು

ಕಡಿಮೆ ಉಸಿರು ಕೊಟ್ಟು ಉಚ್ಚರಿಸಲಾಗುವ ವ್ಯಂಜನಗಳು ಅಲ್ಪ ಪ್ರಾಣಾಕ್ಷರಗಳು

Alpapranaksharagalu

Low-spelled consonants are called Alpapranaksharagalu

ಉದಾಹರಣೆ :

ಕ್ ,ಚ್ ,ಟ್, ತ್, ಪ್, ಗ್, ಜ್, ಡ್, ದ್, ಬ್

ಮಹಾ ಪ್ರಾಣಾಕ್ಷರಗಳು

ಹೆಚ್ಚು ಉಸಿರು ಕೊಟ್ಟು ಉಚ್ಚರಿಸಲಾಗುವ ವ್ಯಂಜನಗಳು ಮಹಾ ಪ್ರಾಣಾಕ್ಷರಗಳು

More breathtaking consonants are called mahapranaksharagalu

ಉದಾಹರಣೆ :

ಖ್ ಛ್ ಠ್ ಥ್ ಫ್

ಘ್ ಝ್ ಢ್ ಧ್ ಭ್

ಅನುನಾಸಿಕಾಕ್ಷರಗಳು

ಮೂಗಿನ ಸಹಾಯದಿಂದ ಉಚ್ಚರಿಸಲಾಗುವ ವ್ಯಂಜನಗಳು ಅನುನಾಸಿಕಾಕ್ಷರಗಳು

Consonants pronounced with the help of the nose are called anunasikaksharagalu

ಉದಾಹರಣೆ :

ಞ್ ಣ್ ನ್ ಮ್

ಅವರ್ಗೀಯ ವ್ಯಂಜನಗಳು

ಯ್ ಇಂದ ಳ್ ಕಾರದವರೆಗಿನ ಅಕ್ಷರಗಳು ಅವರ್ಗೀಯ ವ್ಯಂಜನಗಳು

ಇವು ಉತ್ಪತ್ತಿಯಾಗುವ ಸ್ಥಾನಗಳು ಬೇರೆ ಬೇರೆಯಾಗಿರುವುದರಿಂದ ಈ ಅಕ್ಷರಗಳನ್ನು ನಿರ್ದಿಷ್ಟವಾದ ವರ್ಗಗಳಲ್ಲಿ ಸೇರಿಸಿ ಹೇಳಲು ಸಾಧ್ಯವಿಲ್ಲ ಆದ್ದರಿಂದ ಇವನ್ನು ಅವರ್ಗೀಯ ವ್ಯಂಜನಗಳು ಎ೦ದು ಕರೆಯುವರು

Since the positions in which these are generated are different, it is not possible to add these letters to specific categories so that they are called ಅವರ್ಗೀಯ ವ್ಯಂಜನಗಳು

ಒಟ್ಟು 9 ಅವರ್ಗೀಯ ವ್ಯಂಜನಗಳು

ಉದಾಹರಣೆ :

ಯ್ ರ್ ಲ್ ವ್  ಶ್ ಷ್ ಸ್ ಹ್ ಳ್

Kannada Grammar in English – ವಚನಗಳು

ವಚನಗಳು

ಏಕವಚನ/ ಬಹುವಚನ

Singular / plural

ಜಿಂಕೆ ಎಲ್ಲರ ಮೆಚ್ಚುಗೆಯನ್ನು ಗಳಿಸಿತ್ತು.

ಮೇಲಿನ ವಾಕ್ಯದಲ್ಲಿ ಜಿಂಕೆ ಎಂಬ ಪದ ಒಂದು ಜಿಂಕೆ ಎಂಬುದನ್ನು ಸೂಚಿಸುತ್ತದೆ.

The word deer in the above sentence refers to a single deer.

ಕಾಡಿನಲ್ಲಿ ಬಗೆಬಗೆಯ ಪ್ರಾಣಿಗಳು ವಾಸವಾಗಿದ್ದವು.

ಮೇಲಿನ ವಾಕ್ಯದಲ್ಲಿ ಪ್ರಾಣಿಗಳು  ಎಂಬ ಪದ ಒಂದಕ್ಕಿಂತ ಹೆಚ್ಚು ಎಂಬುದನ್ನು ಸೂಚಿಸುತ್ತದೆ.

The word animals in the above sentence refers to more than one animal

ಸಿಂಹ ಸಭೆಗೆ ಸಿದ್ಧವಾಗಿ ಬಂದಿತ್ತು.

ಜಿಂಕೆಗಳು ಸಭೆಯಲ್ಲಿ ಭಾಗವಹಿಸಿದ್ದವು.

ಮೇಲಿನ ವಾಕ್ಯಗಳಲ್ಲಿ ಸಿಂಹ ಎಂಬ ಪದ ಒಂದು ಸಿಂಹ  ಎಂಬುದನ್ನು ಸೂಚಿಸುತ್ತದೆ.

ಇದು ಏಕವಚನ.

ಜಿಂಕೆಗಳು ಎಂಬ ಪದ ಒಂದಕ್ಕಿಂತ ಹೆಚ್ಚು ಎಂಬುದನ್ನು ಸೂಚಿಸುತ್ತದೆ.

ಇದು ಬಹುವಚನ.

In the above sentences the word lion refers to a single lion.

It is singular.

The word deer refers to more than one.

This is the plural.

ಏಕವಚನ ಮತ್ತು  ಬಹುವಚನ ಉದಾಹರಣೆಗಳು

ಪತ್ರ- ಪತ್ರಗಳು
ಪುಸ್ತಕ-ಪುಸ್ತಕಗಳು
ಕಾರು-ಕಾರುಗಳು
ಗ್ರಾಮ-ಗ್ರಾಮಗಳ
ಮರ-ಮರಗಳು
ಹೂವು-ಹೂಗಳು
ಮನೆ -ಮನೆಗಳು
ಹಸು-ಹಸುಗಳು
ಕುದುರೆ-ಕುದುರೆಗಳು
ದಿನ-ದಿನಗಳು
ತಿಂಗಳು-ತಿಂಗಳುಗಳು
ಹಣ್ಣು-ಹಣ್ಣುಗಳು
ಬಳೆ-ಬಳೆಗಳು
ಬಣ್ಣ-ಬಣ್ಣಗಳು

ಪ್ರಾಣಿ-ಪ್ರಾಣಿಗಳು
ಪ್ರಾಣಿ-ಪ್ರಾಣಿಗಳು
ಚೆಂಡು-ಚೆಂಡುಗಳು
ತರಕಾರಿ-ತರಕಾರಿಗಳು
ಕಾಲು-ಕಾಲುಗಳು
ಇಲಿ-ಇಲಿಗಳು
ಹುಲಿ-ಹುಲಿಗಳು
ನಾಯಕ-ನಾಯಕರು
ತಮ್ಮ-ತಮ್ಮಂದಿರು
ರೈತ- ರೈತರು
ಹೆಂಗಸು-ಹೆಂಗಸರು
ಗಂಡಸು-ಗಂಡಸರು
ಮಗು- ಮಕ್ಕಳು
ಅಮ್ಮ-ಅಮ್ಮಂದಿರು
ಅಪ್ಪ-ಅಪ್ಪಂದಿರು.

ಧೀರ-ಧೀರರು
ಸೈನಿಕ-ಸೈನಿಕರು

Nouns/ನಾಮಪದ Video Explanation

ಕಾಲಗಳು/Tenses Video Explanation

kannada alphabets, swaraksharagalu , yogavahagalu, vyanjanagalu Video Explanation

Also check

kannada Opposite Words

Leave a Reply

Your email address will not be published. Required fields are marked *