shiva ashtottara shatanamavali in kannada

Spread the love

shiva ashtottara shatanamavali in kannada

Shiva mantras in Kannada

ಶಿವ ಮಂತ್ರವನ್ನು ಜಪಿಸುವುದರಿಂದ ಅನೇಕ ಪ್ರಯೋಜನಗಳಿವೆ ಮತ್ತು ಶಿವನನ್ನು  ಸುಲಭವಾಗಿ ಸಂತೋಷಪಡಬಹುದು ಎಂದು ನಂಬಲಾಗಿದೆ.

ಶಿವ ಮಂತ್ರವನ್ನು ಜಪಿಸುವುದರಿಂದ ನಿಮ್ಮ ಜೀವನದಲ್ಲಿ ಸಕಾರಾತ್ಮಕತೆ ಬರುತ್ತದೆ.

ಸಮಸ್ಯೆಗಳನ್ನು ಸುಲಭವಾಗಿ  ನಿವಾರಿಸಲು ಸಹಾಯ ಆಗುತ್ತದೆ

ಮನಸ್ಸನ್ನು ಶಾಂತಗೊಳಿಸುತ್ತದೆ.

ದುಃಖ, ತೊಂದರೆಗಳು, ರೋಗಗಳನ್ನು ಜೀವನದಿಂದ ತೆಗೆದುಹಾಕಲು ಸಹಾಯ ಮಾಡುತ್ತದೆ.

ಇನ್ನೂ ಅನೇಕ ಪ್ರಯೋಜನಗಳನ್ನು ಹೊಂದಿದೆ

shiva ashtottara shatanamavali in kannada

shiva ashtottara shatanamavali in kannada

 ಶಿವ ಅಷ್ಟೋತ್ತರ ಶತನಾಮಾವಳಿ

ಓಂ ಶಿವಾಯ ನಮಃ-ಶಿವನಿಗೆ ನಮಸ್ಕಾರಗಳು

ಓಂ ಮಹೇಶ್ವರಾಯ ನಮಃ-ಶ್ರೇಷ್ಠ ಅಧಿಪತಿಯಾದ ಶಿವನಿಗೆ ನಮಸ್ಕಾರಗಳು

ಓಂ ಶಂಭವೇ ನಮಃ-ಸಮೃದ್ಧಿಯನ್ನು ನೀಡುವವನು

ಓಂ ಪಿನಾಕಿನೇ ನಮಃ-ಬಿಲ್ಲು ಹಿಡಿದವನು

ಓಂ ಶಶಿಶೇಖರಾಯ ನಮಃ- ಕೂದಲಿನಲ್ಲಿ ಚಂದ್ರನನ್ನು ಧರಿಸಿದ ದೇವರು

ಓಂ ವಾಮದೇವಾಯ ನಮಃ-ಮಹಾನ್‌ ದೇವಾನು ಮತ್ತು ಶುಭ

ಓಂ ವಿರೂಪಾಕ್ಷಾಯ ನಮಃ-ಮೂರು ಕಣ್ಣುಗಳು ಉಳ್ಳವನು

ಓಂ ಕಪರ್ದಿನೇ ನಮಃ-ಮಹಾನ್‌ ದೇವಾ ದಟ್ಟವಾದ ಕೂದಲು  ಉಳ್ಳವನು

ಓಂ ನೀಲಲೋಹಿತಾಯ ನಮಃ-ನೀಲಿ ಬಣ್ಣದ ದೇಹ ಉಳ್ಳವನು

ಓಂ ಶಂಕರಾಯ ನಮಃ -ಸಂತೋಷ ಮತ್ತು ಸಮೃದ್ಧಿಯನ್ನು ನೀಡುವವನು

ಓಂ ಶೂಲಪಾಣಯೇ ನಮಃ-ತ್ರಿಶೂಲವನ್ನು ಹಿಡಿದವನು

ಓಂ ಖಟ್ವಾಂಗಿನೇ ನಮಃ-ಕತ್ತಿಯನ್ನು ಹಿಡಿದವನು

ಓಂ ವಿಷ್ಣುವಲ್ಲಭಾಯ ನಮಃ-ವಿಷ್ಣುವಿಗೆ ಪ್ರಿಯನು

ಓಂ ಶಿಪಿವಿಷ್ಟಾಯ ನಮಃ- ಬೆಳಕಿನ ಕಿರಣಗಳನ್ನು ನೀಡುವವನು

ಓಂ ಅಂಬಿಕಾನಾಥಾಯ ನಮಃ-ಪಾರ್ವತಿಯ ಪತಿ

ಓಂ ಶ್ರೀಕಂಠಾಯ ನಮಃ-ಕಂಠದಲ್ಲಿ ವಿಷವನ್ನೇ ಇಟ್ಟು  ಹಿಡಿದವನು

ಓಂ ಭಕ್ತವತ್ಸಲಾಯ ನಮಃ-ಭಕ್ತರನ್ನು ಪ್ರೀತಿಸುವವನು

ಓಂ ಭವಾಯ ನಮಃ- ಸದಾ ಭಕ್ತರ ಪಾಲಿಗೆ ಇರುವನು

ಓಂ ಶರ್ವಾಯ ನಮಃ-ಎಲ್ಲಾ ತೊಂದರೆಗಳಿಂದ ಕಾಪಾಡುವನು

ಓಂ ತ್ರಿಲೋಕೇಶಾಯ ನಮಃ -ಮೂರು ಲೋಕದ ದೇವರು

ಓಂ ಶಿತಿಕಂಠಾಯ ನಮಃ-ಬಿಳಿ ಕುತ್ತಿಗೆ ಹೊಂದಿರುವವನು

ಓಂ ಶಿವಾಪ್ರಿಯಾಯ ನಮಃ-ಪಾರ್ವತಿಯಿಂದ ಇಷ್ಟಪಟ್ಟವನು

ಓಂ ಉಗ್ರಾಯ ನಮಃ-ಉಗ್ರ ಸ್ವರೂಪ ಉಳ್ಳವನು

ಓಂ ಕಪಾಲಿನೇ ನಮಃ-ರುಂಡಮಾಲಾ ಧರಿಸಿದವನು

ಓಂ ಕೌಮಾರಯೇ ನಮಃ-ಕಾಮದೇವನ ಶತ್ರು

ಓಂ ಅಂಧಕಾಸುರ ಸೂದನಾಯ ನಮಃ-ಅಂಧಕಾಸುರನನ್ನು ಕೊಂದವನು

ಓಂ ಗಂಗಾಧರಾಯ ನಮಃ-ಗಂಗೆಯನ್ನು ಶಿರದಲ್ಲಿ ಧರಿಸಿದವನು

ಓಂ ಲಲಾಟಾಕ್ಷಾಯ ನಮಃ-ಹಣೆಯಲ್ಲಿ ಕಣ್ಣು ಇರುವವನು

ಓಂ ಕಾಲಕಾಲಾಯ ನಮಃ-ಸಾವನ್ನು ಗೆದ್ದವನು

ಓಂ ಕೃಪಾನಿಧಯೇ ನಮಃ -ಸಹಾನುಭೂತಿಯ  ದೇವರು

ಓಂ ಭೀಮಾಯ ನಮಃ-ಆತನು ಭಯಭೀತ ರೂಪವನ್ನು ಹೊಂದಿದ್ದಾನೆ

ಓಂ ಪರಶುಹಸ್ತಾಯ ನಮಃ-ಕೈಯಲ್ಲಿ ಕೊಡಲಿ ಹಿಡಿದವನು

ಓಂ ಮೃಗಪಾಣಯೇ ನಮಃ-ಕೈಯಲ್ಲಿ ಜಿಂಕೆ ಹಿಡಿದವನು

ಓಂ ಜಟಾಧರಾಯ ನಮಃ-ಜಟೆಯನ್ನು ಹೊಂದಿರುವವನು

ಓಂ ಕ್ತೆಲಾಸವಾಸಿನೇ ನಮಃ-ಕೈಲಾಸದಲ್ಲಿ ವಾಸಿಸುವವನು

ಓಂ ಕವಚಿನೇ ನಮಃ-ರಕ್ಷಾಕವಚವನ್ನು ಧರಿಸಿದವನು

ಓಂ ಕಠೋರಾಯ ನಮಃ-ಬಲವಾದ ದೇಹವನ್ನು ಹೊಂದಿರುವ ದೇವರು

ಓಂ ತ್ರಿಪುರಾಂತಕಾಯ ನಮಃ-ತ್ರಿಪುರಸುರನನ್ನು ಕೊಂದ ದೇವರು

ಓಂ ವೃಷಾಂಕಾಯ ನಮಃ-ನಂದಿಯ ಮಿತ್ರ

ಓಂ ವೃಷಭಾರೂಢಾಯ ನಮಃ – ನಂದಿಯನ್ನು ವಾಹನವಾಗಿ ಇರಿಸಿಕೊಂಡವನು

ಓಂ ಭಸ್ಮೋದ್ಧೂಳಿತ ವಿಗ್ರಹಾಯ ನಮಃ-ದೇಹದಾದ್ಯಂತ ಚಿತಾಭಸ್ಮವನ್ನು ಶೃಂಗರಿಸಿಕೊಂಡವನು

ಓಂ ಸಾಮಪ್ರಿಯಾಯ ನಮಃ-ಸಮಾನತೆಯಿಂದ ಪ್ರೀತಿಸುವವನು

ಓಂ ಸ್ವರಮಯಾಯ ನಮಃ-ಪ್ರಭಾವ ಬೀರಿರುವವನು

ಓಂ ತ್ರಯೀಮೂರ್ತಯೇ ನಮಃ-ವೇದ ರೂಪವನ್ನು ಹೊಂದಿರುವವನು

ಓಂ ಅನೀಶ್ವರಾಯ ನಮಃ-ವಿನಾಶ ಮಾಡುವವನು

ಓಂ ಸರ್ವಜ್ಞಾಯ ನಮಃ-ಎಲ್ಲವನ್ನು ತಿಳಿದಿರುವವನು

ಓಂ ಪರಮಾತ್ಮನೇ ನಮಃ-ದೈವಿಕ  ಆತ್ಮ

ಓಂ ಸೋಮಸೂರ್ಯಾಗ್ನಿ ಲೋಚನಾಯ ನಮಃ-ಸೂರ್ಯ, ಚಂದ್ರ ಮತ್ತು ಬೆಂಕಿಯ ರೂಪದಲ್ಲಿ ಕಣ್ಣುಗಳನ್ನು ಹೊಂದಿರುವವನು

ಓಂ ಹವಿಷೇ ನಮಃ-ಅಹುತಿ ರೂಪದಲ್ಲಿ ಶ್ರೀಮಂತನಾಗಿರುವವನು

ಓಂ ಯಜ್ಞಮಯಾಯ ನಮಃ -ತ್ಯಾಗದ ವ್ಯಕ್ತಿತ್ವ

ಓಂ ಸೋಮಾಯ ನಮಃ-ಸೌಮ್ಯ  ರೂಪವನ್ನು ಒಳಗೊಂಡಿರುವವನು

ಓಂ ಪಂಚವಕ್ತ್ರಾಯ ನಮಃ-ಐದು ಕುತ್ತಿಗೆಗಳನ್ನು ಹೊಂದಿರುವವನು

ಓಂ ಸದಾಶಿವಾಯ ನಮಃ- ಸದಾ ಶಾಂತಿವಾಗಿ ಇರುವವನು

ಓಂ ವಿಶ್ವೇಶ್ವರಾಯ ನಮಃ-ಇಡಿ ಬ್ರಹ್ಮಾಂಡಕ್ಕೆ ದೇವರು

ಓಂ ವೀರಭದ್ರಾಯ ನಮಃ-ಯಾರು ಹಿಂಸಾತ್ಮಕ, ಆದರೂ ಶಾಂತಿಯುತ

ಓಂ ಗಣನಾಥಾಯ ನಮಃ-ಭದ್ರ ರೂಪ ಆದರೂ ಶಾಂತಿಯುತ

ಓಂ ಪ್ರಜಾಪತಯೇ ನಮಃ-ಎಲ್ಲ ಜೀವಿಗಳ ಅಧಿಪತಿ

ಓಂ ಹಿರಣ್ಯರೇತಸೇ ನಮಃ-ಹೊಳೆಯುವವನು

ಓಂ ದುರ್ಧರ್ಷಾಯ ನಮಃ-ಜಯಿಸಲಾಗದವನು

ಓಂ ಗಿರೀಶಾಯ ನಮಃ – ಪರ್ವತಗಳ  ದೇವರು

ಓಂ ಗಿರಿಶಾಯ ನಮಃ – ಪರ್ವತಗಳ  ದೇವರು

ಓಂ ಅನಘಾಯ ನಮಃ-ದೋಷ ಇಲ್ಲದವನು

ಓಂ ಭುಜಂಗ ಭೂಷಣಾಯ ನಮಃ-ಹಾವುಗಳಿಂದ ಅಲಂಕರಿಸಲ್ಪಟ್ಟಿದ್ದಾನೆ

ಓಂ ಭರ್ಗಾಯ ನಮಃ-ಎಲ್ಲಾ ಪಾಪಗಳನ್ನು ಕೊನೆಗೊಳಿಸುವವನು

ಓಂ ಗಿರಿಧನ್ವನೇ ನಮಃ-ಬಿಲ್ಲಿನಂತೆ ಪರ್ವತವನ್ನು ಹೊಂದಿರುವವನು

ಓಂ ಗಿರಿಪ್ರಿಯಾಯ ನಮಃ- ಪರ್ವತಗಳನ್ನು ಪ್ರೀತಿಸುವವನು

ಓಂ ಕೃತ್ತಿವಾಸಸೇ ನಮಃ-ಆನೆ ಚರ್ಮದ ಬಟ್ಟೆಗಳನ್ನು ಧರಿಸಿದ ದೇವರು

ಓಂ ಪುರಾರಾತಯೇ ನಮಃ-ಪಟ್ಟಣದ ನಾಶಕ

ಓಂ ಭಗವತೇ ನಮಃ-ಸಮೃದ್ಧಿಯ ದೇವರು

ಓಂ ಪ್ರಮಧಾಧಿಪಾಯ ನಮಃ -ಬೃಹತ್‌ ದೀಪ

ಓಂ ಮೃತ್ಯುಂಜಯಾಯ ನಮಃ-ಸಾವನ್ನೇ ಗೆದ್ದವನು

ಓಂ ಸೂಕ್ಷ್ಮತನವೇ ನಮಃ-ಸೂಕ್ಷ್ಮ ದೇಹವನ್ನು ಹೊಂದಿರುವವನು

ಓಂ ಜಗದ್ವ್ಯಾಪಿನೇ ನಮಃ-ಪ್ರಪಂಚದಾದ್ಯಂತ ವಾಸಿಸುವ ದೇವರು

ಓಂ ಜಗದ್ಗುರವೇ ನಮಃ-ಜಗತ್ತಿನ ಗುರು

ಓಂ ವ್ಯೋಮಕೇಶಾಯ ನಮಃ- ಆಕಾಶದಂಥ ಕೂದಲು ಹೊಂದಿರುವವನುಯಾರ 

ಓಂ ಮಹಾಸೇನ ಜನಕಾಯ ನಮಃ-ದೊಡ್ಡ ಸೈನ್ಯವನ್ನು ಹೊಂದಿರುವವನು

ಓಂ ಚಾರುವಿಕ್ರಮಾಯ ನಮಃ-ಅಲೆಮಾರಿ ಯಾತ್ರಿಕರ ರಕ್ಷಕ

ಓಂ ರುದ್ರಾಯ ನಮಃ-ಭಕ್ತರ ನೋವಿನಿಂದ ದುಃಖಿಸುವವನು /ತೀವ್ರ ಕೋಪಗೊಂಡವನು

ಓಂ ಭೂತಪತಯೇ ನಮಃ-ಪಂಚಭೂತ ಭಗವಂತ

ಓಂ ಸ್ಥಾಣವೇ ನಮಃ –ಸ್ಥಿರವಾದವನು

ಓಂ ಅಹಿರ್ಭುಥ್ನ್ಯಾಯ ನಮಃ-ಸರ್ಪವನ್ನು ಧರಿಸಿದವನು

ಓಂ ದಿಗಂಬರಾಯ ನಮಃ-ದಿಕ್ಕುಗಳನ್ನೇ ವಸ್ತ್ರವಾಗಿ ಧರಿಸಿದವನು

ಓಂ ಅಷ್ಟಮೂರ್ತಯೇ ನಮಃ-ಎಂಟು ರೂಪಗಳನ್ನು ಹೊಂದಿರುವ ದೇವರು

ಓಂ ಅನೇಕಾತ್ಮನೇ ನಮಃ-ಹಲವಾರು ರೂಪಗಳನ್ನು ಹೊಂದಿರು ದೇವರು

ಓಂ ಸ್ವಾತ್ತ್ವಿಕಾಯ ನಮಃ-ಶಾಂತಿಯುತವಾಗಿರುವವನು

ಓಂ ಶುದ್ಧವಿಗ್ರಹಾಯ ನಮಃ-ಶುದ್ಧ ಆತ್ಮ ಹೊಂದಿರುವವನು

ಓಂ ಶಾಶ್ವತಾಯ ನಮಃ-ಶಾಶ್ವತ ಮತ್ತು ಅಂತ್ಯವಿಲ್ಲದ

ಓಂ ಖಂಡಪರಶವೇ ನಮಃ- ಕೊಡಲಿಯನ್ನು ಧರಿಸಿದವನು

ಓಂ ಅಜಾಯ ನಮಃ-ಗೆಲ್ಲುವವನು

ಓಂ ಪಾಶವಿಮೋಚಕಾಯ ನಮಃ – ಎಲ್ಲಾ ಕಷ್ಟಗಳಿಂದ ನಮ್ಮನ್ನು ಮುಕ್ತ  ಮಾಡುತ್ತಾನೆ

ಓಂ ಮೃಡಾಯ ನಮಃ-ಸಾವು ಇಲ್ಲದವನು

ಓಂ ಪಶುಪತಯೇ ನಮಃ-ಸಕಲ ಜೀವಿಗಳ ದೇವರು

ಓಂ ದೇವಾಯ ನಮಃ-ದೇವಾನ್ ದೇವತೆ

ಓಂ ಮಹಾದೇವಾಯ ನಮಃ- ಶ್ರೇಷ್ಠ ದೇವರು

ಓಂ ಅವ್ಯಯಾಯ ನಮಃ-ಬದಲಾವಣೆಗೆ ಎಂದಿಗೂ ಒಳಪಡದವನು

ಓಂ ಹರಯೇ ನಮಃ-ವಿಷ್ಣುವಿನಂತೆಯೇ

ಓಂ ಪೂಷದಂತಭಿದೇ ನಮಃ-ಪುಷ್ಪದಂತನನ್ನು ಕೊಂದವನು

ಓಂ ಅವ್ಯಗ್ರಾಯ ನಮಃ-ಆಕ್ರೋಶ ಗೊಳ್ಳದವನು

ಓಂ ದಕ್ಷಾಧ್ವರಹರಾಯ ನಮಃ-ದಕ್ಷಿನ ನಾಶಕ

ಓಂ ಹರಾಯ ನಮಃ -ಎಲ್ಲಾ ಬಂಧನ ಮತ್ತು ಪಾಪಗಳನ್ನು ಕರಗಿಸುವ ಭಗವಂತ

ಓಂ ಭಗನೇತ್ರಭಿದೇ ನಮಃ- ಚಂದ್ರ ,ಸೂರ್ಯ ಮತ್ತು ಬೆಂಕಿಯನ್ನು ಕಣ್ಣುಗಳಂತೆ ಹೊಂದಿರುವವನು

ಓಂ ಅವ್ಯಕ್ತಾಯ ನಮಃ-ಸ್ಪಷ್ಟವಾಗಿಲ್ಲದವನು

ಓಂ ಸಹಸ್ರಾಕ್ಷಾಯ ನಮಃ-ಮಿತಿಯಿಲ್ಲದ ರೂಪಗಳನ್ನು ಹೊಂದಿರುವವನು/ಸಾವಿರ ಕಣ್ಣುಗಳನ್ನು ಹೊಂದಿರುವವನು

ಓಂ ಸಹಸ್ರಪಾದೇ ನಮಃ-ಎಲ್ಲೆಡೆ ನಿಂತು ನಡೆಯುತ್ತಿರುವ ಭಗವಂತ

ಓಂ ಅಪಪರ್ಗಪ್ರದಾಯ ನಮಃ-ಎಲ್ಲಾ  ಕೊಡುವ /ಪೂರ್ಣಗೊಳಿಸಲು ನಮಗೆ ಸಹಾಯ ಮಾಡುವವನು

ಓಂ ಅನಂತಾಯ ನಮಃ-ಅಂತ್ಯವಿಲ್ಲದವನು

ಓಂ ತಾರಕಾಯ ನಮಃ-ಮಾನವಕುಲದ ವಿಮೋಚಕ ಭಗವಂತ

ಓಂ ಪರಮೇಶ್ವರಾಯ ನಮಃ -ಮಹಾನ್ ದೇವರು/ಭಗವಂತ

Shiva Mantras in Kannada

ಪಂಚಕ್ಷರಿ ಶಿವ ಮಂತ್ರ

         “ಓಂ ನಮಃ ಶಿವಾಯ”

 ಅರ್ಥ :ಓಂ ನಮಃ ಶಿವಾಯ ಪಂಚಕ್ಷರಿ ಶಿವ ಮಂತ್ರದ ಅರ್ಥ  ನಾನು ಶಿವನಿಗೆ ನಮಸ್ಕರಿಸುತ್ತೇನೆ ಎಂದು,ಪಂಚಕ್ಷರಿ ಶಿವ ಮಂತ್ರವನ್ನು ನಾವು  ರಕ್ಷಣೆ ಮತ್ತು ಸುರಕ್ಷತೆಗಾಗಿ ಜಪಿಸುತ್ತೇವೆ. ಆಂತರಿಕ ಸಾಮರ್ಥ್ಯ ಮತ್ತು ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು  ಜೀವನದಲ್ಲಿ  ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ

Mahamrityunjaya mantra in Kannada

ಮೃತ್ಯುಂಜಯಾಯ ರುದ್ರಾಯ | ನೀಲಕಂಠಾಯ ಶಂಭವೇ ||

ಅಮೃತೇಶಾಯ ಶರ್ವಾಯ |ಮಹದೇವಾಯ ತೇ ನಮಃ ||

ಮಂತ್ರದ ಅರ್ಥ

ಹೇ  ಮೃತ್ಯುವ ಗೆದ್ದವನೇ, ರುದ್ರ ದೇವನೇ, ಕೊರಳಲ್ಲಿ ವಿಷಧರಿಸಿದವನೇ,

ದೇವದೇವನೇ,ಮಹಾದೇವನೇ ನಿನಗೆ ನಮ್ಮ ನಮಸ್ಕಾರಗಳು

ತ್ರ್ಯಯಂಬಕಂ ಯಜಾಮಹೇ  | ಸುಗಂಧಿ೦ ಪುಷ್ಠಿ ವರ್ಧನಂ||

 ಉರ್ವಾರುಕಮಿವ ಬಂಧನಾನ್ । ಮೃತ್ಯೇರ್ಮುಕ್ಷೀಯ  ಮಾಮೃತಾತ್ ||

ಮಂತ್ರದ ಅರ್ಥ

ಸಕಲಾಯುಷ್ಯ, ಆರೋಗ್ಯದಾಯಕನೂ, ತ್ರಿನೇತ್ರನೂ ಆದ ಶಿವನು

ನನನ್ನು ಮೃತ್ಯವಿನ ಭಯದಿಂದ  ಸೌತೇಕಾಯಿಯು ಅದರ ಬಳ್ಳಿಯಿಂದ ಬೇರ್ಪಡುವಂತೆ ಸುಲಭವಾಗಿ ಪರಿಹರಿಸಲಿ

Shiva Gayatri Mantra/ಶಿವ ಗಾಯತ್ರಿ ಮಂತ್ರ

 “ಓಂ ತತ್ಪುರುಷಾಯ ವಿದ್ಮಹೇ

ಮಹಾದೇವಾಯ ಧೀಮಹಿ

ತನ್ನೋರುದ್ರಃ ಪ್ರಚೋದಯಾತ್‌”

ಅರ್ಥ –  ನಾನು ಮಹಾದೇವನನ್ನು ಪ್ರಾರ್ಥಿಸುತ್ತೇನೆ.ನನಗೆ  ಹೆಚ್ಚಿನ ಬುದ್ಧಿಶಕ್ತಿ ನೀಡಿ,ಜ್ಞಾನದಿಂದ ನನ್ನನ್ನು ಆಶೀರ್ವದಿಸು

ಗಾಯತ್ರಿ ಮಂತ್ರವು ಅತ್ಯಂತ ಶಕ್ತಿಶಾಲಿ ಹಿಂದೂ ಮಂತ್ರಗಳಲ್ಲಿ ಒಂದಾಗಿದೆ  ಮತ್ತು  ಶಿವ ಗಾಯತ್ರಿ ಮಂತ್ರವೂ ಆಗಿದೆ. ನೀವು ಮನಸ್ಸಿನ ಶಾಂತಿಗಾಗಿ  ನೀವು ಮಂತ್ರವನ್ನು ಜಪಿಸಬಹುದು.

.

Leave a Reply

Your email address will not be published. Required fields are marked *